ಬೆಂಗಳೂರು: ಸಹೋದರ ರಾಣಾನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿರುವ ರಕ್ಷಿತಾ ಪ್ರೇಮ್ ಏಕ್ ಲವ್ಯಾ ಎಂಬ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ರಚಿತಾ ರಾಮ್ ನಾಯಕಿ ಎಂದು ಘೋಷಿಸಿದ್ದರು.ಆದರೆ ಐ ಲವ್ ಯೂ ಸಿನಿಮಾದಲ್ಲಿ ಬೋಲ್ಡ್ ಪಾತ್ರ ಮಾಡಿದ್ದಕ್ಕೆ ಸಾರ್ವಜನಿಕವಾಗಿ ನಾನು ಆ ಪಾತ್ರ ಮಾಡಬಾರದಿತ್ತು ಎಂದು ಗೋಳು ತೋಡಿಕೊಂಡಿದ್ದ ರಚಿತಾ ರಾಮ್ ರನ್ನು ಖಂಡಿಸಿದ ರಕ್ಷಿತಾ ತಮ್ಮ ಚಿತ್ರದಿಂದ ರಚಿತಾಗೆ ಕೊಕ್ ಕೊಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.