ದರ್ಶನ್ ಜತೆಗೆ ಸಿನಿಮಾ ಯಾವಾಗ ಎಂದ ಅಭಿಮಾನಿಗೆ ರಕ್ಷಿತಾ ಹೇಳಿದ್ದೇನು ಗೊತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 15 ಫೆಬ್ರವರಿ 2020 (08:58 IST)
ಬೆಂಗಳೂರು: ರಕ್ಷಿತಾ-ದರ್ಶನ್ ಜೋಡಿ ಸ್ಯಾಂಡಲ್ ವುಡ್ ನಲ್ಲಿ ದೂಳೆಬ್ಬಿಸಿದ ಸೂಪರ್ ಹಿಟ್ ಆನ್ ‍ಸ್ಕ್ರೀನ್ ಜೋಡಿ. ಈ ಜೋಡಿ ಮತ್ತೆ ಸಿನಿಮಾ ಮಾಡಬೇಕೆಂದು ಬಯಸುವ ಅಭಿಮಾನಿಗಳು ಈಗಲೂ ಇದ್ದಾರೆ.

 
ಇತ್ತೀಚೆಗೆ ದರ್ಶನ್ ರಕ್ಷಿತಾ ತೀರ್ಪುಗಾರರಾಗಿರುವ ಕಾಮಿಡಿ ಕಿಲಾಡಿಗಳು ವೇದಿಕೆಗೆ ಬಂದಾಗಲೂ ಅವರಿಗೆ ಇದೇ ಪ್ರಶ್ನೆ ಎದುರಾಗಿತ್ತು. ಆಗ ಸದ್ಯದಲ್ಲೇ ಮಾಡುವೆ ಎಂದು ಅಶ‍್ವಾಸನೆ ಕೊಟ್ಟಿದ್ದರು. ಆದರೆ ಅಭಿಮಾನಿಗಳು ರಕ್ಷಿತಾ ಮಾತನ್ನು ಮರೆತಿಲ್ಲ.
 
ಸಾಮಾಜಿಕ ಜಾಲತಾಣದಲ್ಲಿ ಏಕ್ ಲವ್ ಯಾ ಟೀಸರ್ ಬಗ್ಗೆ ಬರೆದುಕೊಂಡ ರಕ್ಷಿತಾಗೆ ಅಭಿಮಾನಿಯೊಬ್ಬರು ದರ್ಶನ್ ಜತೆ ಸಿನಿಮಾ ಯಾವಾಗ ಎಂಬ ಪ್ರಶ್ನೆ ಕೇಳಿದ್ದಾರೆ.  ಇದಕ್ಕೆ ಪ್ರತಿಕ್ರಿಯಿಸಿರುವ ರಕ್ಷಿತಾ ದರ್ಶನ್ ಮತ್ತು ಪ್ರೇಮ್ ಗೆ ಡೇಟ್ ಮತ್ತು ಟೈಮ್ ಸಿಕ್ಕಾಗ ಅವರಿಬ್ಬರೂ ಜತೆಯಾಗಿ ಕೆಲಸ ಮಾಡಿದಾಗ ಎಂದು ಪ್ರತಿಕ್ರಿಯಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :