ಬೆಂಗಳೂರು: ನಟಿ ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ ಪ್ರೇಮ್ ನಿರ್ದೇಶಿಸಿರುವ ಏಕ್ ಲವ್ ಯಾ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ. ಈ ಬಗ್ಗೆ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಮುತ್ತತ್ತಿಯಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆದಿರುವುದಾಗಿ ಮಾಹಿತಿ ನೀಡಿದ ರಕ್ಷಿತಾ ಚಿತ್ರತಂಡದೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ.ಆದರೆ ಈ ಫೋಟೋಗಳಲ್ಲಿ ಹೀರೋಯಿನ್ ಕಂಡುಬಂದಿಲ್ಲ. ಕೇವಲ ನಾಯಕ ರಾಣಾ, ರಕ್ಷಿತಾ ಪ್ರೇಮ್, ಪ್ರೇಮ್ ಹಾಗೂ ಚಿತ್ರತಂಡವಿದೆ. ಇದನ್ನು ನೋಡಿ ನೆಟ್ಟಿಗರೊಬ್ಬರು ಹೀರೋಯಿನ್ ಇಲ್ಲದೇ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಸಿದ್ದೀರಾ