ಬೆಂಗಳೂರು: ಪತಿ, ನಿರ್ದೇಶಕ ಜೋಗಿ ಪ್ರೇಮ್ ಗೆ ಇಂದು ಜನ್ಮದಿನದ ಸಂಭ್ರಮ. ಇನ್ನು, ಪ್ರೇಮ್ ಜನ್ಮದಿನಕ್ಕೆ ಪತ್ನಿ, ನಟಿ ರಕ್ಷಿತಾ ಪ್ರೇಮ್ ಸ್ಪೆಷಲ್ ಮೆಸೇಜ್ ಮೂಲಕ ವಿಶ್ ಮಾಡಿದ್ದಾರೆ. ಪ್ರೇಮ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬರೆದಿರುವ ರಕ್ಷಿತಾ ನೀವು ನಂಗೆ ಎಷ್ಟು ಸ್ಪೆಷಲ್ ಎಂದು ಹೇಳಲೂ ಸಾಧ್ಯವಿಲ್ಲ. ನೀವು ನನ್ನ ಜತೆಗೆ ಜೀವನ ಪಯಣದಲ್ಲಿ ಜತೆಯಾಗಿದ್ದಕ್ಕೆ ಧನ್ಯವಾದಗಳು. ನಾನು ಭೇಟಿ ಮಾಡಿದ ಅತ್ಯಂತ ಸುಂದರ, ಒಳ್ಳೆಯ ವ್ಯಕ್ತಿ ನೀವು.