ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ ಜಯಲಲಿತಾ, ಆಕೆಯ ಆಪ್ತೆ ಶಶಿಕಲಾ ನಡುವಿನ ಸಂಬಂಧದ ಬಗ್ಗೆ ತಿಳಿದುಕೊಂಡು ಚಕಿತನಾಗಿದ್ದೇನೆ ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಿಳಿಸಿದ್ದಾರೆ. ಜಯಲಲಿತಾ ಮತ್ತು ಶಶಿಕಲಾ ಜೀವನಕಥೆಯಾಧಾರವಾಗಿ ’ಶಶಿಕಲಾ’ ಎಂಬ ಹೆಸರಿನ ಚಿತ್ರ ತೆಗೆಯುತ್ತಿರುವುದಾಗಿ ವರ್ಮಾ ತಿಳಿಸಿದ್ದಾರೆ.