Widgets Magazine

ರಮೇಶ್ ಅರವಿಂದ್ ಮಾಸ್ ಡೈಲಾಗ್, ಮಾಸ್ ಅವತಾರ ಇಂದು ಅನಾವರಣ

ಬೆಂಗಳೂರು| Krishnaveni K| Last Modified ಶುಕ್ರವಾರ, 21 ಫೆಬ್ರವರಿ 2020 (08:49 IST)
ಬೆಂಗಳೂರು: ರಮೇಶ್ ಅರವಿಂದ್ ಅಭಿನಯದ ಬಹುನಿರೀಕ್ಷಿತ ‘ಶಿವಾಜಿ ಸುರತ್ಕಲ್’ ಸಿನಿಮಾ ಇಂದು ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ರಮೇಶ್ ಹೊಸ ಅವತಾರ ನೀಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

 
ರಮೇಶ್ ಅರವಿಂದ್ ಪಕ್ಕಾ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾಗಳನ್ನೇ ಮಾಡಿಕೊಂಡು ಬಂದವರು. ಆದರೆ ಶಿವಾಜಿ ಸುರತ್ಕಲ್ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಒಂದು ಕೊಲೆ ರಹಸ್ಯವನ್ನು ಬೇಧಿಸುವ ಪತ್ತೆದಾರಿ ಅಧಿಕಾರಿಯಾಗಿ ರಮೇಶ್ ನಟಿಸಿದ್ದಾರೆ.
 
ಈ ಸಿನಿಮಾ ಮೇಲೆ ರಮೇಶ್ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಯಾಕೆಂದರೆ ಇದುವರೆಗೆ ರಮೇಶ್ ಸಿನಿಮಾದಲ್ಲಿರದ ಮಾಸ್ ಡೈಲಾಗ್, ಅವತಾರ ಈ ಸಿನಿಮಾದಲ್ಲಿ ನಿರೀಕ್ಷಿಸಬಹುದಾಗಿದೆ. ಅವರ ಈ ಹೊಸ ಇಮೇಜ್ ನ್ನು ಜನರು ಒಪ್ಪಿಕೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ.
ಇದರಲ್ಲಿ ಇನ್ನಷ್ಟು ಓದಿ :