Widgets Magazine

ರಮೇಶ್ ಅರವಿಂದ್ ಥ್ರಿಲ್ಲರ್ ಸಿನಿಮಾ ರಿಲೀಸ್ ಡೇಟ್ ಬಹಿರಂಗ

ಬೆಂಗಳೂರು| Krishnaveni K| Last Modified ಗುರುವಾರ, 16 ಜನವರಿ 2020 (09:13 IST)
ಬೆಂಗಳೂರು: ರಮೇಶ್ ಅರವಿಂದ್ ನಿರ್ದೇಶಿಸಿ, ನಟಿಸಿರುವ ಶಿವಾಜಿ ಸುರತ್ಕಲ್ ಎಂಬ ಥ್ರಿಲ್ಲರ್ ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗವಾಗಿದೆ.

 
ಈ ಸಿನಿಮಾದಲ್ಲಿ ರಮೇಶ್ ಅರವಿಂದ್ ಒಂದು ಕೊಲೆ ಪ್ರಕರಣವನ್ನು ಬೇಧಿಸುವ ಪತ್ತೆದಾರಿ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗಾಗಿ ರಮೇಶ‍್ ತಮ್ಮ ಲುಕ್ ಬದಲಾಯಿಸಿಕೊಂಡಿದ್ದರು.
 
ಈ ಸಿನಿಮಾ ಫೆಬ್ರವರಿ 21 ರಂದು ಬಿಡುಗಡೆಯಾಗುತ್ತಿರುವುದಾಗಿ ಮಕರ ಸಂಕ್ರಾಂತಿ ದಿನ ರಮೇಶ್ ಅರವಿಂದ್ ಇನ್ ಸ್ಟಾಂಗ್ರಾಂ ಮೂಲಕ ಘೋಷಿಸಿದ್ದಾರೆ. ಪುಷ್ಪಕ ವಿಮಾನ ಸಿನಿಮಾ ಬಳಿಕ ಅಂದರೆ ಬರೋಬ್ಬರಿ 2 ವರ್ಷದ ಬಳಿಕ ರಮೇಶ್ ನಟನೆಯ ಸಿನಿಮಾ ಬಿಡುಗಡೆಯಾಗುತ್ತಿರುವುದು ಇದೇ ಮೊದಲು.




ಇದರಲ್ಲಿ ಇನ್ನಷ್ಟು ಓದಿ :