ಬೆಂಗಳೂರು: ರಮೇಶ್ ಅರವಿಂದ್ ನಾಯಕರಾಗಿ ಅಭಿನಯಿಸಿದ್ದ ಶಿವಾಜಿ ಸುರತ್ಕಲ್ ಎಂಬ ಥ್ರಿಲ್ಲರ್ ಸಿನಿಮಾ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೇ ಹುಮ್ಮಸ್ಸಿನಲ್ಲಿ ನಿರ್ದೇಶಕ ಆಕಾಶ್ ಶ್ರೀವತ್ಸ ಪಾರ್ಟ್ 2 ಮಾಡುವುದಾಗಿ ಹೇಳಿದ್ದರು. ಆದರೆ ಅವರು ಅಷ್ಟಕ್ಕೇ ಸುಮ್ಮನಾಗಿಲ್ಲ. ಈಗಾಗಲೇ ಶಿವಾಜಿ ಸುರತ್ಕಲ್ ಪಾರ್ಟ್ 2 ಕೆಲಸ ಶುರು ಮಾಡಿದ್ದಾರೆ. ನಿರ್ದೇಶಕ ಆಕಾಶ್ ಬರ್ತ್ ಡೇಗೆ ಶುಭ ಹಾರೈಸಿರುವ ರಮೇಶ್ ಅರವಿಂದ್ ಈ ವಿಚಾರವನ್ನು ಹೇಳಿದ್ದಾರೆ.ಆಕಾಶ್ ಈಗಾಗಲೇ ಶಿವಾಜಿ ಸುರತ್ಕಲ್ ಎರಡನೇ ಭಾಗದ