ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್ ಚಿತ್ರ ಇದೇ ಫೆಬ್ರವರಿ 21ಕ್ಕೆ ತೆರೆಗೆ ಬರಲು ರೆಡಿಯಾಗಿದೆ. ಚಿತ್ರದಲ್ಲಿ ಡಿಟೆಕ್ಟಿವ್ ಪಾತ್ರದಲ್ಲಿ ಎರಡು ವಿಭಿನ್ನ ಶೇಡ್ನಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಕುತೂಹಲಕಾರಿ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ಸಖತ್ ಥ್ರಿಲ್ ಕೊಡುತ್ತಿದೆ. ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ಮೊದಲ ಬಾರಿ ತನಿಖಾಧಿಕಾರಿಯಾಗಿ ರಮೇಶ್ ಅರವಿಂದ್ ಬಣ್ಣಹಚ್ಚಿರೋದು ಚಿತ್ರದ ವಿಶೇಷ ಶಿವಾಜಿ ಸುರತ್ಕಲ್ ಪತ್ತೇದಾರಿ ಕಥಾನಕ