101 ನೇ ಸಿನಿಮಾ ಹೊಸ್ತಿಲಲ್ಲಿ ಹಳೆಯ ನೆನಪಿಗೆ ಜಾರಿದ ರಮೇಶ್ ಅರವಿಂದ್

ಬೆಂಗಳೂರು| Krishnaveni K| Last Modified ಶನಿವಾರ, 7 ಸೆಪ್ಟಂಬರ್ 2019 (09:33 IST)
ಬೆಂಗಳೂರು: ಸ್ಪುರದ್ರೂಪಿ ನಟ ರಮೇಶ್ ಅರವಿಂದ್ ಅಂದಿಗೂ ಇಂದಿಗೂ ಚಿತ್ರರಂಗದಲ್ಲಿ ತಮ್ಮದೇ ಛಾಪು ಉಳಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಎಂಬ ಬಹುಮುಖ ಪ್ರತಿಭೆ ಈಗ 101 ನೇ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದ್ದಾರೆ.
 > ರಮೇಶ್ ಅರವಿಂದ್ ಈಗ 101 ನೇ ಸಿನಿಮಾ ಬಿಡುಗಡೆ ಸಂಭ್ರಮದಲ್ಲಿದ್ದಾರೆ. 100 ನೇ ಸಿನಿಮಾ ಪುಷ್ಪಕ ವಿಮಾನ ಭಾರೀ ಹಿಟ್ ಆಗಿತ್ತು. ಅದಾದ ಬಳಿಕ ರಮೇಶ್ 100 ಎಂಬ ಸಿನಿಮಾದ ನಿರ್ದೇಶಕರಾಗಿರುವ ಸುದ್ದಿ ಓದಿರುತ್ತೀರಿ. ಇದರ ನಡುವೆ ಅವರು ಅಭಿನಯಿಸಿದ ಶಿವಾಜಿ ಸುರತ್ಕಲ್ ಎಂಬ ಸಿನಿಮಾ ಟೀಸರ್ ಬಿಡುಗಡೆಯಾಗುತ್ತಿದೆ.>   ರಮೇಶ್ ಇದುವರೆಗೆ ಮಾಡದ ವಿಭಿನ್ನ ಪಾತ್ರ ಈ ಸಿನಿಮಾದಲ್ಲಿ ನೋಡಬಹುದು ಎನ್ನಲಾಗಿದೆ. ಆ ಸಿನಿಮಾದ ಟೀಸರ್ ಇಂದು 10 ಗಂಟೆಗೆ ಬಿಡುಗಡೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ರಮೇಶ್ ತಮ್ಮ ಹಳೆಯ ನೆನಪುಗಳಿಗೆ ಜಾರಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ತಮ್ಮ 1 ನೇ ಸಿನಿಮಾ, 10 ನೇ ಸಿನಿಮಾ ಮತ್ತು 100 ನೇ ಸಿನಿಮಾದ ಚಿತ್ರಗಳನ್ನು ಹಾಕಿ 101 ನೇ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿರುವ ವಿಚಾರ ಹಂಚಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :