ಬೆಂಗಳೂರು: ಕನ್ನಡ ಸಿನಿಮಾ ರಂಗ ಎಂದೆಂದಿಗೂ ನೆನಪಿಡುವಂತಹ ಸಿನಿಮಾಗಳಲ್ಲಿ ರಮೇಶ್ ಅರವಿಂದ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಅಮೃತವರ್ಷಿಣಿ ಸಿನಿಮಾವೂ ಒಂದು. ಈ ಸಿನಿಮಾ ಬಿಡುಗಡೆಯಾಗಿ 25 ವರ್ಷ ಕಳೆದಿದೆ.ಈ ವಿಶೇಷ ಕ್ಷಣವನ್ನು ರಮೇಶ್ ಅರವಿಂದ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ಜೊತೆಗೆ ಅಂದು ನಟಿಸಿದ್ದ, ಹಾಡಿದ್ದ, ಸಿನಿಮಾದಲ್ಲಿ ಕೆಲಸ ಮಾಡಿದ್ದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.ರಮೇಶ್ ಗೆ ಹೊಸ ಇಮೇಜ್ ಕೊಟ್ಟ ಸಿನಿಮಾವಿದು. ಇದರ ಹಾಡು ಇಂದಿಗೂ ಸೂಪರ್ ಹಿಟ್. ರಮೇಶ್