ಮಗಳ ಮದುವೆ ಬಳಿಕ ಮತ್ತೊಂದು ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿರುವ ರಮೇಶ್ ಅರವಿಂದ್

ಬೆಂಗಳೂರು| Krishnaveni K| Last Modified ಮಂಗಳವಾರ, 5 ಜನವರಿ 2021 (09:30 IST)
ಬೆಂಗಳೂರು: ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಕಳೆದ ವಾರವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮಗಳ ಮದುವೆ ಕಾರ್ಯಕ್ರಮದ ಬಳಿಕ ರಮೇಶ್ ಅರವಿಂದ್ ವಿವಾಹ ಆರತಕ್ಷತೆಗೆ ಸಿದ್ಧತೆ ನಡೆಸಿದ್ದಾರೆ.
 

ರಮೇಶ್ ತಮ್ಮ ಮಗಳ ಮದುವೆ ಕಾರ್ಯಕ್ರಮವನ್ನು ಕೇವಲ ಆಪ್ತೇಷ್ಟರಿಗೆ ಮಾತ್ರ ಆಹ್ವಾನವಿತ್ತು ಖಾಸಗಿಯಾಗಿ ನಡೆಸಿದ್ದರು. ಆದರೆ ವಿವಾಹ ಆರತಕ್ಷತೆಯನ್ನು ಎಲ್ಲಾ ಗಣ್ಯರನ್ನು ಕರೆದು ಅದ್ಧೂರಿಯಾಗಿ ಮಾಡಲು ತೀರ್ಮಾನಿಸಿದ್ದಾರೆ. ಜನವರಿ 16 ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ವಿವಾಹ ಆರತಕ್ಷತೆ ನಡೆಯಲಿದ್ದು, ರಮೇಶ್ ದಂಪತಿ ಸಿಎಂ ಯಡಿಯೂರಪ್ಪನವರಿಗೆ ಖುದ್ದಾಗಿ ಭೇಟಿ ನೀಡಿ ಆಹ್ವಾನವಿತ್ತಿದ್ದಾರೆ. ಈ ಸಮಾರಂಭದಲ್ಲಿ ಸಿನಿಮಾ, ರಾಜಕೀಯ ರಂಗದ ಗಣ್ಯರು ಭಾಗವಹಿಸಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :