ಬೆಂಗಳೂರು: ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಇನ್ನು ಮುಂದೆ ನಟ ರಮೇಶ್ ಅರವಿಂದ್ ನಿರೂಪಿಸಲಿದ್ದಾರೆ.ಇದುವರೆಗೆ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದ ನಿರೂಪಕರಾಗಿದ್ದರು. ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಭಾರೀ ಜನಪ್ರಿಯವಾಗಿತ್ತು. ಆದರೆ ಎರಡು-ಮೂರು ವರ್ಷಗಳಿಂದ ಕಾರ್ಯಕ್ರಮ ಸ್ಥಗಿತಗೊಂಡಿತ್ತು.ಇದೀಗ ಮತ್ತೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ಸಿಗಲಿದ್ದು, ಈ ಬಾರಿ ಪುನೀತ್ ಬದಲಿಗೆ ಸ್ಪುರದ್ರೂಪಿ ನಟ, ಮಾತಿನ ಮಲ್ಲ ರಮೇಶ್ ಅರವಿಂದ್ ಕಾರ್ಯಕ್ರಮ ನಿರೂಪಿಸಲಿರುವ ಸುದ್ದಿ ಬಂದಿದೆ.