ಬೆಂಗಳೂರು: ಕನ್ನಡದ ಪ್ರತಿಭಾವಂತ ನಟ, ನಿರ್ದೇಶಕ ರಮೇಶ್ ಅರವಿಂದ್ ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ ಕ್ವೀನ್ ಚಿತ್ರವನ್ನು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ದೇಶಿಸಲಿದ್ದಾರೆ ಎನ್ನುವುದು ಈಗಾಗಲೇ ಗೊತ್ತಾಗಿದೆ. ಬಾಲಿವುಡ್ ನಲ್ಲಿ ಕಂಗನಾ ರನಾವತ್ ಮಾಡಿದ್ದ ಮುಖ್ಯ ಪಾತ್ರವನ್ನು ಕನ್ನಡದಲ್ಲಿ ಪಾರುಲ್ ಯಾದವ್ ಮಾಡಲಿದ್ದಾರೆ ಎಂಬುದು ಈಗಾಗಲೇ ಘೋಷಣೆಯಾಗಿದೆ. ಅದಕ್ಕಾಗಿ ಚಿತ್ರತಂಡ ಒಂದು ಪಾರ್ಟಿಯನ್ನೂ ಆಯೋಜಿಸಿ ಬಟರ್ ಫ್ಲೈ ಎಂದು ಚಿತ್ರದ ಹೆಸರಿಟ್ಟಿರುವುದಾಗಿ ಘೋಷಿಸಿತ್ತು.ಇದೀಗ ತಮಿಳಿನಲ್ಲಿ ಮುಖ್ಯ