ಬೆಂಗಳೂರು: ನಟ, ನಿರ್ದೇಶಕ ರಮೇಶ್ ಅರವಿಂದ್ ಗೂ ಕಿರುತೆರೆಗೂ ನಂಟು ಹೊಸದೇನಲ್ಲ. ಉದಯ ಟಿವಿಯ ‘ನಂದಿನಿ’ ಧಾರವಾಹಿಯನ್ನು ನಿರ್ಮಿಸಿರುವ ರಮೇಶ್ ಈಗ ಮತ್ತೊಂದು ಧಾರವಾಹಿ ನಿರ್ದೇಶನಕ್ಕಿಳಿಯುತ್ತಿದ್ದಾರೆ. ಉದಯ ವಾಹಿನಿಯಲ್ಲಿ ‘ಸುಂದರಿ’ ಎನ್ನುವ ಹೊಸ ಧಾರವಾಹಿ ಪ್ರಸಾರವಾಗಲಿದ್ದು, ಈ ಧಾರವಾಹಿಯನ್ನು ರಮೇಶ್ ನಿರ್ಮಿಸುತ್ತಿದ್ದಾರೆ. ತೆಲುಗಿನಲ್ಲಿ ಖ್ಯಾತರಾಗಿರುವ ಅಪ್ಪಟ ಕನ್ನಡತಿ ನಟಿ ಐಶ್ವರ್ಯಾ ಪಿಸ್ಸೆ ಈ ಧಾರವಾಹಿಯ ಪ್ರಮುಖ ಪಾತ್ರಧಾರಿ. ಸದ್ಯದಲ್ಲೇ ಈ ಧಾರವಾಹಿ ಪ್ರಸಾರ ಆರಂಭಿಸಲಿದೆ.