ಕಿಚ್ಚನ ಪೈಲ್ವಾನ್ ಗರಡಿಯಲ್ಲಿ ರಮೇಶ್ ಅರವಿಂದ್! ಖುಷಿ ಹಂಚಿಕೊಂಡ ಸುದೀಪ್

ಬೆಂಗಳೂರು| Krishnaveni K| Last Modified ಗುರುವಾರ, 5 ಸೆಪ್ಟಂಬರ್ 2019 (10:02 IST)
ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಪೈಲ್ವಾನ್ ಸಿನಿಮಾದ ಬಿಡುಗಡೆ ಖುಷಿಯಲ್ಲಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 12 ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
 > ಕಿಚ್ಚನಿಗೆ ಜತೆಯಾಗಿ ಸುನಿಲ್ ಶೆಟ್ಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇದೀಗ ಮತ್ತೊಬ್ಬ ಪ್ರತಿಭೆ ರಮೇಶ್ ಅರವಿಂದ್ರ ಪೈಲ್ವಾನ್ ಸಿನಿಮಾಗೆ ಸಾಥ್ ನೀಡುತ್ತಿದ್ದಾರೆ. ಆದರೆ ಅಭಿನಯದ ಮೂಲಕವಂತೂ ಅಲ್ಲ.>   ಪೈಲ್ವಾನ್ ಸಿನಿಮಾದ ಆರಂಭದಲ್ಲಿ ಬರುವ ಕುಸ್ತಿ ಕುರಿತಾದ ಪರಿಚಯಕ್ಕೆ ರಮೇಶ್ ಅರವಿಂದ್ ಹಿನ್ನಲೆ ಧ್ವನಿ ನೀಡಲಿದ್ದಾರೆ. ಕನ್ನಡ ವರ್ಷನ್ ಗೆ ರಮೇಶ್ ಧ್ವನಿ ನೀಡಿದ್ದು ಈಗಾಗಲೇ ರೆಕಾರ್ಡಿಂಗ್ ಮುಗಿಸಿದ್ದಾರೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ಸುದೀಪ್, ಈ ಬಹುಮುಖ ಪ್ರತಿಭೆ ನಮ್ಮ ಪೈಲ್ವಾನ್ ಸಿನಿಮಾದಲ್ಲಿ ಕೆಲಸ ಮಾಡಿರುವುದು ನಮಗೆ ಗೌರವ. ಈ ಬಾರಿ ಆನ್ ಸ್ಕ್ರೀನ್ ನಲ್ಲಿ ಅಲ್ಲ. ಆದರೆ ಪೈಲ್ವಾನ್ ನಲ್ಲಿ ಜತೆಯಾಗಿ ಕೆಲಸ ಮಾಡಿರುವುದಕ್ಕೆ ಸಂತೋಷವಿದೆ. ಧನ್ಯವಾದಗಳು ಸರ್. ಎಂದು ಸುದೀಪ್ ಟ್ವೀಟ್ ಮುಖಾಂತರ ರಮೇಶ್ ಅರವಿಂದ್ ಗೆ ಧನ್ಯವಾದ ಸಲ್ಲಿಸಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :