ಬೆಂಗಳೂರು : ಮನೆ ಬಾಡಿಗೆ ಹಣ ಕೇಳಿದ್ದಕ್ಕೆ ಸ್ಯಾಂಡಲ್ ವುಡ್ ನ ನಾನಿ ಚಿತ್ರದ ನಿರ್ಮಾಪಕ ರಮೇಶ್ ಜೈನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಮೇಶ್ ಜೈನ್ ಅವರ ಬ್ಯಾಟರಾಯನಪುರದ ಕವಿತಾ ಲೇಔಟ್ ನಲ್ಲಿರುವ ಮನೆಯೊಂದರಲ್ಲಿ ಬಾಡಿಗೆಯಿದ್ದ ನಸೀರ್ ಹಾಗೂ ಪಾಷ ಎಂಬುವವರು ಕಳೆದ 7 ವರ್ಷಗಳಿಂದ ಬಾಡಿಗೆಯನ್ನೇ ಕೊಡುತ್ತಿರಲಿಲ್ಲ. ಈ ವಿಚಾರವಾಗಿ ತಮ್ಮ ಮನೆಯ ಬಾಡಿಗೆ ಹಣವನ್ನು ಕಲೆಕ್ಟ್ ಮಾಡಿಕೊಳ್ಳುವುದಕ್ಕೆ ರಮೇಶ್ ಹೋಗಿದಾಗ ಅಲ್ಲಿ