ಬೆಂಗಳೂರು: ನಟಿ ರಮ್ಯಾ ಕಳೆದ ಕೆಲವು ಸಮಯದಿಂದ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡುವ ತಯಾರಿ ಮಾಡುತ್ತಿದ್ದಾರಾ? ಹೀಗೊಂದು ಅನುಮಾನ ಈಗ ಹುಟ್ಟಿಕೊಂಡಿದೆ. ಅದಕ್ಕೆ ಕಾರಣವೂ ಇದೆ.ಇತ್ತೀಚೆಗೆ ರಮ್ಯಾ ಸಿನಿಮಾ ಸಂಬಂಧಿತ ಕೆಲವು ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿದ್ದಾರೆ. ಇತ್ತೀಚೆಗೆ ಕೋಟಿಗೊಬ್ಬ 3 ಟ್ರೈಲರ್ ಬಗ್ಗೆ ಬರೆದುಕೊಂಡಿದ್ದರು. ಅದಕ್ಕೆ ಮೊದಲು ದಿಗಂತ್ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದರು.ಹೀಗೇ ಚಿತ್ರರಂಗದ ಒಂದೊಂದು ಕೆಲಸಗಳಿಗೆ ನಿಧಾನವಾಗಿ ಮರಳುತ್ತಿರುವುದು ನೋಡಿದರೆ ಅವರು