ಬೆಂಗಳೂರು: ಕಿಚ್ಚ ಸುದೀಪ್ ಮತ್ತು ನಟಿ ರಮ್ಯಾ ನಡುವೆ ಹಿಂದೆ ಸಾಕಷ್ಟು ಹಗ್ಗ ಜಗ್ಗಾಟಗಳು ಇತ್ತು ಎನ್ನುವುದು ಗಾಂಧಿನಗರಿಗರಿಗೆ ಗೊತ್ತಿರುವ ವಿಚಾರವೇ. ಹಾಗಿದ್ದರೂ ಇಬ್ಬರೂ ಪರಸ್ಪರ ಈಗಲೂ ಸ್ನೇಹ ಉಳಿಸಿಕೊಂಡಿದ್ದಾರೆ. ಇದೀಗ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಇದನ್ನು ವೀಕ್ಷಿಸಿರುವ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಸುದೀಪ್ ಬಗ್ಗೆ ಬರೆದುಕೊಂಡಿದ್ದಾರೆ.‘ನಮ್ಮ ಬೆಂಜಾಮಿನ್ ಬಟನ್ ಕಿಚ್ಚ ಸುದೀಪ್ ನಿಮಗೆ ವಯಸ್ಸೇ ಆಗಲ್ವಾ? ಟ್ರೈಲರ್ ತುಂಬಾ ಅದ್ಭುತವಾಗಿದೆ’