ಮಂಡ್ಯ(ಮಾ.14): ಮಾಜಿ ಸಿಎಂ ಎಸ್.ಎಂ. ಕೃಷ್ಣ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ. . ನಾಳೆ ಎಸ್.ಎಂ. ಕೃಷ್ಣ ಬಿಜೆಪಿ ಸೇರುವುದು ಬಹುತೇಕ ಖಚಿತಗೊಂಡಿದೆ. ಎಸ್.ಎಂ. ಕೃಷ್ಣ ಬೆನ್ನಲ್ಲೇ ಅವರ ಬೆಂಬಲಿಗರೂ ಕಮಲ ಹಿಡಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಲ್ಲಿ ಪ್ರಮುಖವಾದ ಹೆಸರು ನಟಿ ಮತ್ತು ಮಾಜಿ ಸಂಸದೆ ರಮ್ಯಾ. ಕೃಷ್ಣ ಅವರ ರಾಜಕೀಯ ಕರ್ಮಭೂಮಿ ಮಂಡ್ಯದಲ್ಲಿ ಈ ಬಗ್ಗೆ ಮಾತುಗಳು ಹರಿದಾಡುತ್ತಿದ್ದು, ರಮ್ಯಾ ಸೇರ್ಪಡೆಗೆ ಬಿಜೆಪಿ ಪಕ್ಷದ ಕಾರ್ಯಕರ್ತರಿಂದ ವಿರೋಧಗಳು