ಬೆಂಗಳೂರು: ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ ಬೆನ್ನಲ್ಲೇ ಮಾಜಿ ಕಾಂಗ್ರೆಸ್ ಸಂಸದೆಯೂ ಆಗಿದ್ದ ನಟಿ ರಮ್ಯಾ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ದೇವರನ್ನು ಪೂಜೆ ಮಾಡಲು ಮಂದಿರ ಅಥವಾ ಮಸೀದಿಯ ಅಗತ್ಯವಿಲ್ಲ ಎಂದು ಜನ ಅರ್ಥ ಮಾಡಿಕೊಂಡರೆ ನಾನು ಅತ್ಯಂತ ಸಂತೋಷಪಡುತ್ತೇನೆ ಎಂದು ರಮ್ಯಾ ಹೇಳಿಕೊಂಡಿದ್ದಾರೆ.ಹಿಂದೂಗಳು ರಾಮಮಂದಿರ ನಿರ್ಮಾಣವಾಗುತ್ತಿರುವುದಕ್ಕೆ ಖುಷಿಯಾಗಿದ್ದಾರೆ ಎನ್ನುವುದು ನನಗೆ ಸಂತೋಷ ತಂದಿದೆ. ಒಂದು ವೇಳೆ ಮುಸ್ಲಿಮರು ಮಸೀದಿ ನಿರ್ಮಾಣ ಮಾಡುವುದಕ್ಕೆ ಸಂತೋಷಪಟ್ಟರೆ