ಬೆಂಗಳೂರು: ನಟಿ ರಮ್ಯಾ ರಾಜಕೀಯದಲ್ಲಿ ಸಕ್ರಿಯರಾದ ಮೇಲೆ ಸಿನಿಮಾವನ್ನು ಮರೆತೇಬಿಟ್ಟರೇನೋ ಎಂಬಷ್ಟು ಬ್ಯುಸಿಯಾಗಿಬಿಟ್ಟರು. ಆದರೆ ಇದೀಗ ಅಪರೂಪಕ್ಕೆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.ಆದರೆ ಬಣ್ಣ ಹಚ್ಚಲ್ಲ ಎಂದು ಶಪಥ ಮಾಡಿರುವ ರಮ್ಯಾ ಇದೀಗ ರಕ್ಷಿತ್ ಶೆಟ್ಟಿ ಸಿನಿಮಾದ ಟ್ರೇಲರ್ ಬಗ್ಗೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ರಕ್ಷಿತ್ ಸಿನಿಮಾ ಅವನೇ ಶ್ರೀಮನ್ನಾರಾಯಣ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದನ್ನು ಮೆಚ್ಚಿ ರಮ್ಯಾ ಟ್ವೀಟ್ ಮಾಡಿದ್ದಾರೆ.ನಿಮ್ಮ ಎಲ್ಲಾ ಸಿನಿಮಾಗಳ ಬಗ್ಗೆ ನಾನು ಓದುತ್ತಿರುತ್ತೇನೆ