ಕಂಗನಾ ರನಾವತ್ ಗೆ ಟಾಂಗ್ ಕೊಟ್ಟ ನಟಿ ರಮ್ಯಾ

ಬೆಂಗಳೂರು| Krishnaveni K| Last Modified ಗುರುವಾರ, 4 ಫೆಬ್ರವರಿ 2021 (09:40 IST)
ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ಟ್ವೀಟ್ ಮಾಡಿರುವ ಪಾಪ್ ಗಾಯಕಿ ರಿಹಾನೆ ವಿರುದ್ಧ ಕಿಡಿ ಕಾರಿದ ಬಾಲಿವುಡ್ ನಟಿ ಕಂಗನಾ ರನಾವತ್ ಗೆ ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ತಿರುಗೇಟು ನೀಡಿದ್ದಾರೆ.
 > ರಿಹಾನೆಗೆ ತಿರುಗೇಟು ನೀಡಿದ್ದ ಕಂಗನಾ ‘ನಾವ್ಯಾಕೆ ಇದರ ಬಗ್ಗೆ ಮಾತನಾಡುತ್ತಿಲ್ಲ ಎಂದರೆ, ಇವರ್ಯಾರೂ ರೈತರಲ್ಲ, ಇವರೆಲ್ಲಾ ಭಾರತವನ್ನು ಇಬ್ಭಾಗ ಮಾಡಲು ನೋಡುತ್ತಿರುವ ಭಯೋತ್ಪಾದಕರು. ಇದರಿಂದ ದುರ್ಬಲಗೊಳ್ಳುವ ಭಾರತವನ್ನು ಚೀನಾ ಸ್ವಾಧೀನಪಡಿಸಿಕೊಂಡು ಅಮೆರಿಕದಂತೆ ಚೀನಿ ವಸಾಹತು ಮಾಡಬಹುದು’ ಎಂದು ಕಿಡಿ ಕಾರಿದ್ದರು. ಇದಕ್ಕೆ ಟಾಂಗ್ ಕೊಟ್ಟಿರುವ ನಟಿ ರಮ್ಯಾ ಹಾಗಿದ್ದರೆ ನಮ್ಮ ಪ್ರಧಾನಿ ದುರ್ಬಲರು ಎಂದು ಒಪ್ಪಿಕೊಂಡಿರಾ? ಎಂದು ವ್ಯಂಗ್ಯ ಮಾಡಿದ್ದಾರೆ.>


ಇದರಲ್ಲಿ ಇನ್ನಷ್ಟು ಓದಿ :