ಈ ರಾಂಧವ ನೈಜ ಸಾಹಸ ನಿಪುಣ!

ಬೆಂಗಳೂರು, ಮಂಗಳವಾರ, 13 ಆಗಸ್ಟ್ 2019 (16:07 IST)

ಬಿಗ್ಬಾಸ್ ಸ್ಪರ್ಧಿಯಾಗಿ ಬಂದ ನಂತರದಲ್ಲಿ ನಟಿಸಿರೋ ಮೊದಲ ಚಿತ್ರ ರಾಂಧವ. ಬಹುಶಃ ಸಂಖ್ಯೆಯೇ ಮುಖ್ಯವಾಗಿದ್ದರೆ ಭುವನ್ ಈ ಎರಡು ವರ್ಷಗಳಲ್ಲಿ ಒಂದಷ್ಟು ಚಿತ್ರಗಳಲ್ಲಿ ನಟಿಸಿಯಾಗಿರುತ್ತಿತ್ತೇನೋ. ಆದರೆ ಪ್ರತಿಯೊಂದಕ್ಕೂ ಗಂಭೀರವಾಗಿ ತಯಾರಿ ನಡೆಸಿ ಸೆನ್ಸೇಷನ್ ಕ್ರಿಯೇಟ್ ಮಾಡುವಂತೆಯೇ ಹೀರೋ ಆಗಿ ಲಾಂಚ್ ಆಗಬೇಕೆಂಬುದು ಭುವನ್ರ ಆಕಾಂಕ್ಷೆಯಾಗಿತ್ತು. ಅದಕ್ಕೆ ತಕ್ಕುದಾಗಿಯೇ ಚಿತ್ರ ರೆಡಿಯಾಗಿದೆ.
randhava
ನಿರ್ದೇಶನ ಮಾಡಿರೋ ಈ ಚಿತ್ರಕ್ಕಾಗಿ ಭುವನ್ ಪೊನ್ನಣ್ಣ ತಯಾರಾದ ರೀತಿಯದ್ದೇ ರಂಗು ರಂಗಾದ ಕಥೆಗಳಿವೆ. ಇಲ್ಲಿ ಭುವನ್ ಮೂರು ಶೇಡುಗಳ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದಕ್ಕಾಗಿ ಅವರು ತಿಂಗಳುಗಟ್ಟಲೆ ತಯಾರಾಗಿದ್ದಾರೆ. ಆ ಪಾತ್ರವೇ ಆಗಿ ಹೋದಂತೆ ಒಗ್ಗಿಕೊಂಡಿದ್ದಾರೆ. ಹಾಗಿದ್ದ ಮೇಲೆ ಅವರು ಇಲ್ಲಿನ ಸಾಹಸ ಸನ್ನಿವೇಶಗಳೂ ಕೂಡಾ ನೈಜವಾಗಿಯೇ ಮೂಡಿ ಬರಬೇಕೆಂದು ಆಶಿಸಿದ್ದರಲ್ಲಿ ಯಾವ ಅಚ್ಚರಿಯು ಇಲ್ಲ.
 
ಈ ಚಿತ್ರದಲ್ಲಿ ಫ್ಯಾಂಟಸಿ ಡ್ರಾಮಾಗಳ ಜೊತೆ ಜೊತೆಗೇ ಮೈ ನವಿರೇಳಿಸೋ ಅದ್ಭುತ ಸಾಹಸ ಸನ್ನಿವೇಶಗಳೂ ಇವೆ. ಇಡೀ ಚಿತ್ರದ ಪ್ರಧಾನ ಆಕರ್ಷಣೆಯೇ ಇಂಥಾ ಸಾಹಸ ಸನ್ನಿವೇಶಗಳು. ಆದರೆ ಅಂಥಾ ರಿಸ್ಕೀ ಸಾಹಸಗಳನ್ನು ಕೂಡಾ ನೈಜವಾಗಿಯೇ ಮಾಡಬೇಕೆಂಬುದು ಭುವನ್ ಇಂಗಿತವಾಗಿತ್ತು. ಆದರೆ ಆರಂಭದಲ್ಲಿ ಅನಾಹುತ ಸಂಭವಿಸಬಹುದೆಂದು ಹೆದರಿ ನಿರ್ದೇಶಕರು ಹಿಂದೇಟು ಹಾಕಿದ್ದರಂತೆ. ಆದರೆ ಭುವನ್ ಕಡೆಗೂ ಅದಕ್ಕೆ ಒಪ್ಪಿಸಿ ಸಾಹಸ ಸನ್ನಿವೇಶಗಳನ್ನು ಯಾವ ಗಿಮಿಕ್ಕೂ ಇಲ್ಲದೆ ನೈಜವಾಗಿ ನಿರ್ವಹಿಸಿದ್ದಾರಂತೆ. ಈ ಮೂಲಕ ಆಕ್ಷಷನ್ ಹೀರೋ ಆಗಿಯೂ ನೆಲೆ ಕಂಡುಕೊಳ್ಳುವ ಮಹದಾಸೆ ಭುವನ್ ಅವರದ್ದು. ಅದರ ಅಸಲೀ ಮಜಾ ಇದೇ ತಿಂಗಳ 23ರಂದು ಬಯಲಾಗಲಿದೆ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನವ ತಂತ್ರಜ್ಞಾನಗಳಿಂದ ಮನ ಸೆಳೆಯಲಿರೋ ರಾಂಧವ!

ಸದ್ಯದ ವಾತಾವರಣದಲ್ಲಿ ಸಿನಿಮಾವೊಂದು ಜನರನ್ನು ಸೆಳೆಯಬೇಕೆಂದರೆ ತಾಂತ್ರಿಕವಾಗಿಯೂ ಹೊಸತನ ಅಳವಡಿಸಿಕೊಳ್ಳಲೇ ...

news

ಲವರ್ ಬಾಯ್ ಆಗಲೊಲ್ಲದ ರಗಡ್ ರಾಂಧವ!

ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಇದೇ ತಿಂಗಳ ಇಪ್ಪತ್ಮೂರನೇ ತಾರೀಕಿನಂದು ತೆರೆಗೆ ಬರಲು ಮಹೂರ್ತ ...

news

ಅಭಿಮಾನಿಯ ಮಾತಿನಿಂದ ಕಿಚ್ಚ ಸುದೀಪ್ ಗೆ ಬೇಸರ

ಬೆಂಗಳೂರು: ಉತ್ತರ ಕರ್ನಾಟಕ ನೆರೆ ಪೀಡಿತ ಪ್ರದೇಶಗಳ ಜನರ ನೆರವಿಗೆ ಸ್ಯಾಂಡಲ್ ವುಡ್ ತಾರೆಯ ಸಾಕಷ್ಟು ಸಹಾಯ ...

news

ಹೊಸ ಆರಂಭದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಮತ್ತೊಂದು ಸಿನಿಮಾ ತೆರೆಗೆ ಬರಲು ...