ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿಬಂದಿರೋ ರಂಗನಾಯಕಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈವರೆಗೂ ಹಗ್ಗದ ಕೊನೆ, ತ್ರಯಂಬಕಂ ಚಿತ್ರಗಳ ಮೂಲಕ ಅಪರೂಪದ ಕಥೆಗಳೊಂದಿಗೆ ಗಮನ ಸೆಳೆದಿದ್ದ ನಿರ್ದೇಶಕ ದಯಾಳ್. ಈ ಬಾರಿ ಅವರು ಈ ಹಿಂದಿನ ಚಿತ್ರಗಳಿಗಿಂತಲೂ ಭಿನ್ನವಾದ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆಂಬುದಕ್ಕೆ ಇದೀಗ ಬಿಡುಗಡೆಯಾಗಿರೋ `ರಂಗನಾಯಕಿ ಟ್ರೇಲರ್ ಸಾಕ್ಷಿಯಾಗಿ ನಿಂತಿದೆ. ಅದಿತಿ ಪ್ರಭುದೇವ ಮುಖ್ಯಪಾತ್ರದಲ್ಲಿ ನಟಿಸಿರುವ ರಂಗನಾಯಕಿ ಮಹಿಳಾ ಪ್ರಧಾನ ಚಿತ್ರ. ವ್ಯಾಲ್ಯೂಮ್ 1 ವರ್ಜಿನಿಟಿ ಎಂಬ ಟ್ಯಾಗ್ ಲೈನ್