ಬೆಂಗಳೂರು: ಧಾರವಾಹಿ ಶೂಟಿಂಗ್ ಕೂಡಾ ಇತ್ತೀಚೆಗೆ ಯಾವ ಸಿನಿಮಾಗೂ ಕಮ್ಮಿಯಿಲ್ಲದಂತೇ ನಡೆಯುತ್ತದೆ. ಇದೀಗ ನಟಿ ರಂಜಿನಿ ರಾಘವನ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದು, ಅದನ್ನು ನೋಡಿದ ಅಭಿಮಾನಿಗಳ ಎದೆ ಝಲ್ ಎಂದಿದೆ. ಕನ್ನಡತಿ ಧಾರವಾಹಿಗಾಗಿ ಕಟ್ಟದಿಂದ ಬೀಳುವ ದೃಶ್ಯವೊಂದರ ಚಿತ್ರೀಕರಣ ಸಮಯದಲ್ಲಿ ರಂಜಿನಿ ರೋಪ್ ಕಟ್ಟಿಕೊಂಡು ಬಹುಮಹಡಿ ಕಟ್ಟಡದ ಮೇಲೇರುವ ದೃಶ್ಯದ ವಿಡಿಯೋ ಅಪ್ ಲೋಡ್ ಮಾಡಿದ್ದರು.ಇಂತಹದ್ದೊಂದು ಸಾಹಸ ದೃಶ್ಯ ಮಾಡುವಾಗ ಸಾಕಷ್ಟು ಮುನ್ನೆಚ್ಚರಿಕೆ