ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಕಿರುತೆರೆ ನಟಿ ಮೇಲೆ ಅತ್ಯಾಚಾರವೆಸಗಿ ವಂಚಿಸಿದ ಘಟನೆ ನಗರದಲ್ಲಿ ವರದಿಯಾಗಿದೆ.ಈ ಸಂಬಂಧ 26 ವರ್ಷದ ನಟಿ ನೀಡಿದ ದೂರು ನೀಡಿದ್ದು, ಹೈದರಾಬಾದ್ ಮೂಲದ ಆರೋಪಿ ಸಂಗಮೇಶ್ ಪಾಟೀಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಈ ಹಿಂದೆ ಕಿರುತೆರೆಯಲ್ಲಿ ನಟಿಸಿದ್ದ ನಟಿಗೆ ತಾನು ಸಿನಿಮಾ ನಿರ್ಮಾಪಕ ಎಂದು ಪರಿಚಯ ಮಾಡಿಕೊಂಡಿದ್ದ ಆರೋಪಿ ಸಂಗಮೇಶ್ ಸಿನಿಮಾಗಳಲ್ಲಿ ಉತ್ತಮ ಅವಕಾಶ ನೀಡುವುದಾಗಿ ನಂಬಿಸಿದ್ದ. ಈ ಸಂಬಂಧ ಹೈದರಾಬಾದ್