Photo Courtesy: Twitterಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ತಮ್ಮ ಆಪ್ತರನ್ನು ಕುಟುಂಬ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ತಮ್ಮ ಆಪ್ತ ಸಹಾಯಕ ಸಾಯಿ ಎಂಬವರ ಮದುವೆಗೆ ರಶ್ಮಿಕಾ ಕುಟುಂಬದವರಂತೇ ಹಾಜರಾಗಿದ್ದೇ ಇದಕ್ಕೆ ಸಾಕ್ಷಿ. ಆದರೆ ಈ ವೇಳೆ ರಶ್ಮಿಕಾ ಕೊಂಚ ಮುಜುಗರಕ್ಕೀಡಾದ ಘಟನೆ ನಡೆಯಿತು.ಸೀರೆಯುಟ್ಟು ಸಾಂಪ್ರದಾಯಿಕವಾಗಿ ಕಂಗೊಳಿಸುತ್ತಿದ್ದ ರಶ್ಮಿಕಾ ಮದುವೆಯಲ್ಲಿ ಎಲ್ಲರ ಕೇಂದ್ರ ಬಿಂದುವಾಗಿದ್ದರು. ವೇದಿಕೆಗೆ ತೆರಳಿ ಮದುಮಕ್ಕಳಿಗೆ ರಶ್ಮಿಕಾ ಅಕ್ಷತೆ ಹಾಕಿ ಶುಭ ಹಾರೈಸಿದ್ದಾರೆ.ಈ ವೇಳೆ ಮದುಮಗ-ಮದುಮಗಳು ಇಬ್ಬರೂ ಇದ್ದಕ್ಕಿದ್ದಂತೆ ರಶ್ಮಿಕಾ