ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಇಂದು ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಶೆಟ್ಟಿ ಮತ್ತು ಸ್ನೇಹಿತರ ಗ್ಯಾಂಗ್ ತಮ್ಮ ಸ್ನೇಹದ ಕತೆ ಹೇಳಲಿದ್ದಾರೆ.ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ರಕ್ಷಿತ್ ಜೊತೆಗೆ ಅವರ ಮಾಜಿ ಪ್ರೇಮಿ, ನಟಿ ರಶ್ಮಿಕಾ ಮಂದಣ್ಣ ಕೂಡಾ ಇದ್ದಾರೆ! ರಕ್ಷಿತ್-ರಶ್ಮಿಕಾ ಜೋಡಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಹಿಟ್ ಆಗಿದ್ದ ಜೋಡಿ. ಬಳಿಕ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡು