ಬೆಂಗಳೂರು: ಲಾಕ್ ಡೌನ್ ಮುಗಿದ ತಕ್ಷಣ ಒಮ್ಮೆ ಹೊರಹೋದರೆ ಸಾಕು ಎಂದು ಜನ ಸಾಮಾನ್ಯರಂತೇ ಸೆಲೆಬ್ರಿಟಿಗಳೂ ಲಿಸ್ಟ್ ಮಾಡಿಕೊಂಡು ಕಾಯುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಕೂಡಾ ತಮ್ಮ ಪ್ರಾಮುಖ್ಯತೆ ಏನು ಎಂದು ಅಭಿಮಾನಿಗಳ ಜತೆ ಇತ್ತೀಚೆಗೆ ಹಂಚಿಕೊಂಡಿದ್ದಾರೆ.ಲಾಕ್ ಡೌನ್ ಮುಗಿದ ತಕ್ಷಣ ಏನು ಮಾಡ್ತೀರಾ? ಎಂದು ಅಭಿಮಾನಿಯೊಬ್ಬರು ಇನ್ ಸ್ಟಾಗ್ರಾಂನಲ್ಲಿ ಕೇಳಿದ್ದಕ್ಕೆ ರಶ್ಮಿಕಾ ತಮ್ಮ ಸ್ನೇಹಿತರ ಉದ್ದ ಪಟ್ಟಿ ಕೊಟ್ಟಿದ್ದು, ಇವರೆಲ್ಲರ ಜತೆ ಸುತ್ತಾಡಲು ಪ್ಲ್ಯಾನ್ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.ಕೆಲಸವೇನಿದ್ದರೂ ಆಮೇಲೆ.