ಸರಿಲೇರು ನೀಕೆವ್ವರು ಬಿಡುಗಡೆಗೂ ಮೊದಲೇ ಖ್ಯಾತ ನಟಿಯಿಂದ ಸಿಕ್ತು ರಶ್ಮಿಕಾ ಮಂದಣ್ಣಗೆ ಬಿಗ್ ಕಾಂಪ್ಲಿಮೆಂಟ್!

ಹೈದರಾಬಾದ್| Krishnaveni K| Last Modified ಶನಿವಾರ, 11 ಜನವರಿ 2020 (09:01 IST)
ಹೈದರಾಬಾದ್: ಪ್ರಿನ್ಸ್ ಮಹೇಶ‍್ ಬಾಬು ಮತ್ತು ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ಇಂದು ಬಿಡುಗಡೆಯಾಗುತ್ತಿದ್ದು, ಇದಕ್ಕೂ ಮೊದಲೇ ನಟಿ ರಶ್ಮಿಕಾಗೆ ಖ್ಯಾತ ನಟಿಯಿಂದ ಬಿಗ್ ಕಾಂಪ್ಲಿಮೆಂಟ್ ಸಿಕ್ಕಿದೆ.

 
ರಶ್ಮಿಕಾ ಈ ಸಿನಿಮಾದಲ್ಲಿ ಬಬ್ಲಿ, ತುಂಟಾಟದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ನಲ್ಲಿ ರಶ್ಮಿಕಾ ಅಭಿನಯ ನೋಡಿ ಮೆಚ್ಚಿಕೊಂಡಿರುವ ನಟಿ ಮಾಲಾಶ್ರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ನೋಡಲು ಕಾತುರಳಾಗಿರುವುದಾಗಿ ಹೇಳಿದ್ದಾರೆ. ಮಾಲಾಶ್ರೀಯಿಂದ ಸಿಕ್ಕಿರುವ ಕಾಂಪ್ಲಿಮೆಂಟ್ ನಿಂದ ಉಬ್ಬಿರುವ ರಶ್ಮಿಕಾ ಧನ್ಯವಾದ ಸಲ್ಲಿಸಿದ್ದಾರೆ.
 
ಇಂದು ಸಿನಿಮಾ ತೆರೆಗೆ ಬರಲಿದ್ದು, ಮಹೇಶ್ ಬಾಬು ಆಕ್ಷನ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಅಂತೂ ಬರಪೂರ ಮನರಂಜನೆ ಗ್ಯಾರಂಟಿ.
ಇದರಲ್ಲಿ ಇನ್ನಷ್ಟು ಓದಿ :