ರಶ್ಮಿಕಾ ಮಂದಣ್ಣ-ರಕ್ಷಿತ್ ಶೆಟ್ಟಿ ಟ್ವಿಟರ್ ನಲ್ಲೇ ಡ್ಯುಯೆಟ್! ಕಿರಿಕ್ ಜೋಡಿ ಒಂದಾದ್ರಾ?!

ಬೆಂಗಳೂರು| Krishnaveni K| Last Modified ಶನಿವಾರ, 26 ಡಿಸೆಂಬರ್ 2020 (09:56 IST)
ಬೆಂಗಳೂರು: ಕಿರಿಕ್ ಪಾರ್ಟಿ ಎಂಬ ಸಿನಿಮಾ ಮೂಲಕ ರಿಯಲ್ ಲೈಫ್ ನಲ್ಲೂ ಜೋಡಿಯಾಗಲು ಹೊರಟಿದ್ದ ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬಳಿಕ ಎಂಗೇಜ್ ಮೆಂಟ್ ಮಾಡಿಕೊಂಡು ಬ್ರೇಕಪ್ ಆಗಿದ್ದರು. ಇದಾದ ಬಳಿಕ ಇಬ್ಬರೂ ಎಲ್ಲೂ ತಮ್ಮ ಬಗ್ಗೆ ಹೇಳಿಕೊಂಡಿಲ್ಲ.
 

ಆದರೆ ಈಗ ಅದೇ ಸಿನಿಮಾ ವಿಚಾರವಾಗಿ ಈ ಕಿರಿಕ್ ಜೋಡಿ ಒಂದಾಗುತ್ತಿದ್ದಾರಾ ಎಂದು ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಕಾರಣ ರಕ್ಷಿತ್ ಮತ್ತು ರಶ್ಮಿಕಾ ನಡುವಿನ ಟ್ವಿಟರ್ ಮಾತುಕತೆ. ಕಿರಿಕ್ ಪಾರ್ಟಿ ಹಾಡು 100 ಮಿಲಿಯನ್ ವೀಕ್ಷಣೆ ಪಡೆದ ಖುಷಿಯಲ್ಲಿ ಟ್ವೀಟ್ ಮಾಡಿದ್ದ ರಶ್ಮಿಕಾ ರಕ್ಷಿತ್ ಹೆಸರನ್ನು ಟ್ಯಾಗ್ ಮಾಡಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಇದಾದ ಬಳಿಕ ರಕ್ಷಿತ್ ಸರದಿ. ರಕ್ಷಿತ್ ಕೂಡಾ ರಶ್ಮಿಕಾರ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದು, ‘ಮುನ್ನಡೆ ಹುಡುಗಿ.. ನಿನಗೆ ಮತ್ತಷ್ಟು ಯಶಸ್ಸು ಸಿಗಲಿ’ ಎಂದು ಮನಸಾರೆ ಹಾರೈಸಿದ್ದಾರೆ. ಇದಕ್ಕೆ ರಶ್ಮಿಕಾ ಕೂಡಾ ಸ್ಮೈಲಿ ಕಳುಹಿಸಿದ್ದಾರೆ. ಇವರಿಬ್ಬರ ಈ ಟ್ವೀಟ್ ಮಾತುಕತೆ ನೋಡಿ ನೆಟ್ಟಿಗರು ಕೊನೆಗೂ ಒಂದಾದ್ರಾ ಎಂದು ಖುಷಿ ವ್ಯಕ್ತಪಡಿಸುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :