ಸಂಸದ ಪ್ರತಾಪ್ ಸಿಂಹಗೆ ಥ್ಯಾಂಕ್ಸ್ ಹೇಳಿದ ರಶ್ಮಿಕಾ ಮಂದಣ್ಣ

ಬೆಂಗಳೂರು| Krishnaveni K| Last Modified ಮಂಗಳವಾರ, 5 ನವೆಂಬರ್ 2019 (09:22 IST)
ಬೆಂಗಳೂರು: ಕೆಲವು ದಿನಗಳ ಹಿಂದೆ ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಟ್ವಿಟರ್ ನಲ್ಲಿ ಅಭಿಯಾನವೇ ಶುರುವಾಗಿತ್ತು. ಅದರಲ್ಲಿ ನಟಿ ಕೂಡಾ ಪಾಲ್ಗೊಂಡಿದ್ದರು.

 
ಎಮರ್ಜೆನ್ಸಿ ಹಾಸ್ಪಿಟಲ್ ಫಾರ್ ಕೊಡಗು ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಆರಂಭವಾಗಿದ್ದ ಅಭಿಯಾನದಲ್ಲಿ ಕೊಡಗು ಮೂಲದವರಾದ ರಶ್ಮಿಕಾ ಕೂಡಾ ಕೈ ಜೋಡಿಸಿದ್ದರು. ಅಷ್ಟೇ ಅಲ್ಲ, ನೇರವಾಗಿ ಸಂಸದ ಪ್ರತಾಪ್ ಸಿಂಹಗೆ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಮನವಿಯನ್ನೂ ಮಾಡಿದ್ದರು.
 
ಆ ವಿಚಾರಕ್ಕೀಗ ಸಂಸದ ಪ್ರತಾಪ್ ಸಿಂಹರಿಂದ ಸಿಹಿ ಸುದ್ದಿಯೊಂದು ಸಿಕ್ಕಿದೆ. ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ನಿರ್ಮಿಸಲು 100 ಕೋಟಿ ರೂ. ಮಂಜೂರಾಗಿದೆ ಎಂಬ ಸುದ್ದಿಯನ್ನು ತಮ್ಮ ಟ್ವಿಟರ್ ಪೇಜ್ ಮೂಲಕ ಮಾಹಿತಿ ನೀಡಿದ್ದಾರೆ. ಇದಕ್ಕೆ ಸಂತಸ ವ್ಯಕ್ತಪಡಿಸಿರುವ ರಶ್ಮಿಕಾ ಸಂಸದರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :