ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳಿನ ಬೇಡಿಕೆಯ ನಟಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.ಸದ್ಯಕ್ಕೆ ಡಿಯರ್ ಕಾಮ್ರೇಡ್ ಸಿನಿಮಾ ಬಿಡುಗಡೆಗಾಗಿ ರಶ್ಮಿಕಾ ಕಾಯುತ್ತಿದ್ದಾರೆ. ವಿಜಯ್ ದೇವರ ಕೊಂಡ ಜತೆಗೆ ಎರಡನೇ ಬಾರಿ ನಾಯಕಿಯಾಗಿ ರಶ್ಮಿಕಾ ಅಭಿನಯಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಈಗ ಭಾರೀ ಹಿಟ್ ಆಗಿದೆ.ಈ ಟ್ರೈಲರ್ ನೋಡಿ ತಮಿಳು ಸ್ಟಾರ್ ನಟ ಸೂರ್ಯ ರಶ್ಮಿಕಾ ಸೇರಿದಂತೆ ಇಡೀ ಚಿತ್ರತಂಡಕ್ಕೆ ಅಭಿನಂದಿಸಿದ್ದಾರೆ. ಹೃದಯಕ್ಕೆ ಮುಟ್ಟುವಂತಿದೆ ಟ್ರೈಲರ್