ಚೆನ್ನೈ: ಟಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ಬೆಡಗಿ ರಶ್ಮಿಕಾ ಮಂದಣ್ಣ ತಮಿಳಿನಲ್ಲಿ ವಿಜಯ್ ಜೊತೆ ಸಿನಿಮಾ ಮಾಡಬೇಕೆಂಬುದು ಕೇವಲ ಅವರ ಮಾತ್ರವಲ್ಲ, ಅಭಿಮಾನಿಗಳದ್ದೂ ಕನಸಾಗಿತ್ತು. ಆ ಕನಸೀಗ ನನಸಾಗುತ್ತಿದೆ.ಈ ಮೊದಲು ಸಾಮಾಜಿಕ ಜಾಲತಾಣದಲ್ಲಿ ಹಲವರು ರಶ್ಮಿಕಾಗೆ ನೀವು ಯಾವಾಗ ವಿಜಯ್ ಜೊತೆ ನಟಿಸುವುದು ಎಂದು ಪ್ರಶ್ನಿಸುತ್ತಲೇ ಇದ್ದರು. ಅದಕ್ಕೆ ತಕ್ಕಂತೆ ರಶ್ಮಿಕಾ ಕೂಡಾ ವಿಜಯ್ ಜೊತೆ ಅಭಿನಯಿಸುವ ಆಸೆ ವ್ಯಕ್ತಪಡಿಸಿದ್ದರು.ಇದೀಗ ಆ ಕನಸು ನನಸಾಗುತ್ತಿದೆ. ಬೀಸ್ಟ್ ಸಿನಿಮಾ ಬಳಿಕ ವಿಜಯ್