ರಾಕಿಂಗ್ ಸ್ಟಾರ್ ಯಶ್ ಗೆ ವಿಶ್ ಮಾಡಿದಕ್ಕೂ ಟ್ರೋಲ್ ಆದ ರಶ್ಮಿಕಾ ಮಂದಣ್ಣ

ಬೆಂಗಳೂರು| Krishnaveni K| Last Modified ಗುರುವಾರ, 9 ಜನವರಿ 2020 (09:28 IST)
ಬೆಂಗಳೂರು: ಟ್ರೋಲ್ ಆಗುವುದು ರಶ್ಮಿಕಾ ಮಂದಣ್ಣಗೆ ಹೊಸದೇನೂ ಅಲ್ಲ. ಇದೀಗ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಕ್ಕೂ ಟ್ರೋಲ್ ಆಗಿದ್ದಾರೆ.

 
ನಿನ್ನೆ ಯಶ್ ಬರ್ತ್ ಡೇಗೆ ವಿಶ್ ಮಾಡಿದ್ದ ರಶ್ಮಿಕಾ ಹ್ಯಾಪೀ ಬರ್ತ್ ಡೇ ಯಶ್ ಸರ್. ನಿಮ್ಮ ಕೆಜಿಎಫ್ 2 ಸಿನಿಮಾಗಾಗಿ ಕಾಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು.
 
ರಶ್ಮಿಕಾ ಹೀಗೆ ಬರೆದಿರುವುದಕ್ಕೆ ಕಾಮೆಂಟ್ ಮಾಡಿರುವ ಕೆಲವರು ಏನಮ್ಮಾ ಸಡನ್ ಆಗಿ ಕನ್ನಡ ಹೀರೋ ಮೇಲೆ ಪ್ರೀತಿ ಎಂದು ಕಾಲೆಳೆದಿದ್ದಾರೆ. ಮತ್ತೆ ಕೆಲವರು ಅವನೇ ಶ್ರೀಮನ್ನಾರಾಯಣ ಸಿನಿಮಾ ನೋಡಲ್ವಾ? ನಿಮಗೆ ಮೊದಲು ಚಾನ್ಸ್ ಕೊಟ್ಟವರ ಬರ್ತ್ ಡೇಗೆ ಒಂದು ವಿಶ್ ಮಾಡಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. ಅಂತೂ ಇತ್ತೀಚೆಗೆ ರಶ್ಮಿಕಾ ಏನೇ ಮಾಡಿದರೂ ಟೀಕೆಗೊಳಗಾಗುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :