ಸಾಲು ಮರದ ತಿಮ್ಮಕ್ಕನ ಬಗ್ಗೆ ಮಾತನಾಡಲು ಪರದಾಡಿದ ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್

ಚೆನ್ನೈ| Krishnaveni K| Last Modified ಶುಕ್ರವಾರ, 1 ನವೆಂಬರ್ 2019 (08:38 IST)
ಚೆನ್ನೈ: ತಮಿಳು ಕಾರ್ಯಕ್ರಮವೊಂದರಲ್ಲಿ ಸಾಲು ಮರದ ತಿಮ್ಮಕ್ಕನ ಬಗ್ಗೆ ಎರಡು ಮಾತನಾಡಲು ಹೇಳಿದಾಗ ಪರದಾಡಿದ ರಶ್ಮಿಕಾ ಮಂದಣ್ಣರ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 
ಜೆಎಸ್ ಡಬ್ಲ್ಯು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡದ ಹೆಮ್ಮೆಯ ಸಾಲು ಮರದ ತಿಮ್ಮಕ್ಕನಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಮಿಳಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಟ ವಿವೇಕ್ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಸಮಾರಂಭದಲ್ಲಿದ್ದ ರಶ್ಮಿಕಾರನ್ನು ಕರೆದು ನೀವು ಕನ್ನಡಿಗರಾಗಿದ್ದರಿಂದ ಸಾಲು ಮರದ ತಿಮ್ಮಕ್ಕನ ಬಗ್ಗೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಳ್ಳಿ ಎಂದು ವೇದಿಕೆಗೆ ಕರೆದರು.
 
ಆದರೆ ರಶ್ಮಿಕಾ ಒಂದೆರಡು ವಾಕ್ಯಗಳನ್ನು ಪರದಾಡುತ್ತಾ ಇಂಗ್ಲಿಷ್ ನಲ್ಲಿ ಹೇಳುತ್ತಿರಬೇಕಾದರೆ ಮಧ್ಯದಲ್ಲೇ ತಡೆದ ನಟ ವಿವೇಕ್ ತಮಿಳಿನಲ್ಲಿ ತಿಮ್ಮಕ್ಕನ ಸಾಧನೆಗಳನ್ನು ವಿವರವಾಗಿ ಹೇಳಿದರು. ಈ ವಿಡಿಯೋ ಒಂದು ಈಗ ನೆಟ್ಟಿಗರ ಟ್ರೋಲ್ ಗೆ ಗುರಿಯಾಗಿದೆ. ರಶ್ಮಿಕಾ ಮತ್ತೆ ಕನ್ನಡಿಗರು, ಕನ್ನಡದ ವಿಚಾರವಾಗಿ ಟ್ರೋಲ್ ಆಗುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :