ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ನಿನ್ನೆ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಭಿಮಾನಿಗಳಿಂದ ಹಿಡಿದು ಸೆಲೆಬ್ರಿಟಿಯವರೆಗೆ ಈ ಸಿನಿಮಾ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ. ಸಾಮಾನ್ಯ ಎಲ್ ಐಸಿ ನೌಕರ ರತ್ನಾಕರನಿಗೆ ಅಕಸ್ಮಾತ್ತಾಗಿ ತನ್ನ ನಿಜವಾದ ಅಮ್ಮನ ಬಗ್ಗೆ ಗೊತ್ತಾಗುತ್ತದೆ. ಅಲ್ಲಿಂದ ಆತ ಹೆತ್ತಮ್ಮ, ಒಡಹುಟ್ಟಿದವರನ್ನು ಹುಡುಕಿಕೊಂಡು ಬೆಂಗಳೂರಿನಿಂದ ಕಾಶ್ಮೀರದವರೆಗೆ ಅಲ್ಲಿಂದ ಗೋಕರ್ಣದವರೆಗೆ ಪಯಣಿಸುವ ಭಾವುಕ ಪಯಣದ ಕತೆಯೇ ರತ್ನನ್ ಪ್ರಪಂಚ.ಆತನ ಬದುಕಿಗೆ ತಿರುವ