ಒಂದೆರಡು ತಿಂಗಳುಗಳ ಹಿಂದೆ ನಟ ಶರಣ್ ತಮ್ಮ ನಟರಾಜ ಸರ್ವೀಸ್ ಸಿನಿಮಾದ ಪ್ರಮೋಷನ್ಗಾಗಿ ಬೆಂಗಳೂರಿನ ಗಾಂಧೀಬಜಾರ್ನಲ್ಲಿ ಅಲ್ಲ ಅಲ್ಲ ಹಾಡನ್ನು ಭಿಕ್ಷುಕನ ರೀತಿ ವೇಷ ಹಾಕಿಕೊಂಡು ಬೀದಿಯಲ್ಲಿ ಹಾಡಿದ್ದು ನಿಮಗೆಲ್ಲಾ ನೆನಪಿರಬಹುದು. ಇದೀಗ ಸಿನಿಮಾ ತಂಡ ಈ ಹಾಡನ್ನು ಯೂ ಟ್ಯೂಬ್ನಲ್ಲಿ ಬಿಡುಗಡೆ ಮಾಡಿದ್ದು ಹಾಡಿನಲ್ಲಿ ರವಿಶಂಕರ್ ಅವರ ಅಭಿನಯಕ್ಕೆ ಭರ್ಜರಿ ಪ್ರಶಂಸೆಗಳು ಕೇಳಿ ಬರುತ್ತಿವೆ. ರವಿಶಂಕರ್ ಅವರು ಒಬ್ಬ ಉತ್ತಮ ಕಲಾವಿದ ಅನ್ನೋದರಲ್ಲಿ ಎರಡು ಮಾತಿಲ್ಲ. ಕೇವಲ