ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ವಿಲನ್ ಆಗಿ ಆರ್ಭಟ ಮುಂದುವರೆಸಿರುವವರು ರವಿಶಂಕರ್. ಕೆಂಪೇಗೌಡ ಚಿತ್ರದ ಮೂಲಕ ಖಳ ನಟನಾಗಿ ಅಖಾಡಕ್ಕಿಳಿದು ಪ್ರೇಕ್ಷಕರನ್ನು ಸೆಳೆದುಕೊಂಡಿರೋ ಅವರು ಅದೇ ಶೇಡಿನ ಪಾತ್ರಗಳ ಮೂಲಕವೇ ಮನೆ ಮಾತಾಗಿದ್ದಾರೆ. ರವಿಶಂಕರ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆಂದರೆ ಅದು ಖಳನ ಪಾತ್ರವೆಂದೇ ಯಾರಿಗಾದರೂ ಅರ್ಥವಾಗುತ್ತೆ. ಇಂಥಾ ರವಿಶಂಕರ್ ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಚಿತ್ರದಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೈಲರ್ ಮೂಲಕ ಚಿರಂಜೀವಿ ಸರ್ಜಾ ಅವರ ಮಾಸ್ ಅವತಾರದ ಪಾತ್ರ