ಇವತ್ತು ಸ್ಯಾಂಡಲ್ ವುಡ್`ನ ರಿಯಲ್ ಸ್ಟಾರ್ ಉಪೇಂದ್ರ ಅವರ 49ನೇ ಹುಟ್ಟುಹಬ್ಬ. ನಿನ್ನೆ ರಾತ್ರಿಯಿಂದಲೇ ಕತ್ರಿಗುಪ್ಪೆಯ ಮನೆ ಮುಂದೆ ಜಮಾಯಿಸಿರುವ ಅಭಿಮಾನಿಗಳು ಕೇಕ್ ಕತ್ತರಿಸಿ, ಶುಭಾಷಯ ಕೋರಿ, ಫೋಟೋ ತೆಗೆಸಿಕೊಂಡು ಸಂಭ್ರಮಪಡುತ್ತಿದ್ದಾರೆ. ಈ ಹಿಂದೆಲ್ಲ ನಟ, ನಿರ್ದೇಶಕರಾಗಿ ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ಉಪೇಂದ್ರ ಈ ವರ್ಷ ಪ್ರಜಾಕಾರಣಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ವಿಶೇಷ. ಈ ವರ್ಷದ ಬರ್ತ್ ಡೇ ನನಗೆ ಸಂತೃಪ್ತಿ ನೀಡಿದ ಬರ್ತ್ ಡೇ, ಇಷ್ಟಪಟ್ಟಿದ್ದನ್ನ ಮಾಡುತ್ತಿದ್ದೇನೆ ಎಂದು ಖಾಸಗಿ