ಬೆಂಗಳೂರು: ಕಬ್ಜ ಚಿತ್ರದ ಶೂಟಿಂಗ್ ವೇಳೆ ತಲೆಗೆ ಪೆಟ್ಟು ಮಾಡಿಕೊಂಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಶೂಟಿಂಗ್ ವೇಳೆ ಉಪೇಂದ್ರ ತಲೆಗೆ ಕಬ್ಬಿಣದ ರಾಡ್ ತಗುಲಿ ಗಾಯವಾದ ಸುದ್ದಿ ಹರಿದಾಡಿತ್ತು. ಇದರಿಂದಾಗಿ ಉಪೇಂದ್ರ ಅಭಿಮಾನಿಗಳಿಗೆ ಆತಂಕವಾಗಿತ್ತು.ಹೀಗಾಗಿ ಸ್ವತಃ ಉಪೇಂದ್ರ ತಮಗೆ ಪೆಟ್ಟು ಬಿದ್ದ ಭಾಗದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಒಂದು ಸಣ್ಣ ಗಾಯವಷ್ಟೇ. ನಾನು