ಬೆಂಗಳೂರು: ಕೋಟಿಗೊಬ್ಬ 3 ಸಿನಿಮಾ ಬೆಳಗಿನ ಶೋ ರದ್ದಾಗಿರುವುದು ಅಭಿಮಾನಿಗಳಲ್ಲಿ ಆಕ್ರೋಶವುಂಟು ಮಾಡಿದೆ. ಬೆಳಗಿನ ಶೋ ರದ್ದಾಗಿದ್ದಕ್ಕೆ ನಿಜ ಕಾರಣ ಬಯಲಾಗಿದೆ. ತಾಂತ್ರಿಕ ಕಾರಣಗಳಿಂದ ಬೆಳಗಿನ ಶೋ ರದ್ದು ಮಾಡಲಾಗಿದೆ ಎಂದು ಚಿತ್ರಮಂದಿರಗಳ ಮುಂದೆ ಬೋರ್ಡ್ ಹಾಕಲಾಗಿತ್ತು. ಇದರಿಂದ ನಿರ್ಮಾಪಕ ಸೂರಪ್ಪ ಬಾಬು ಮತ್ತು ಥಿಯೇಟರ್ ಮಾಲಿಕರ ವಿರುದ್ಧ ಕಿಚ್ಚನ ಅಭಿಮಾನಿಗಳು ಸಿಟ್ಟಿಗೆದ್ದಿದ್ದರು.ಸಿನಿಮಾ ಥಿಯೇಟರ್ ಗಳಲ್ಲಿ ಡಿಜಿಟಲ್ ರೂಪದಲ್ಲಿ ಚಿತ್ರ ಪ್ರದರ್ಶನ ಮಾಡಲು ಸಿನಿಮಾಗಳ ಸ್ಯಾಟ್ ಲೈಟ್ ಪ್ರಸಾರ ಮಾಧ್ಯಮ