ಹೈದರಾಬಾದ್: ತೆಲುಗು, ಕನ್ನಡ, ಹಿಂದಿ, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಇಂದಿನಿಂದ ತೆರೆಗೆ ಬರುತ್ತಿರುವ ಸಾಹೋ ಸಿನಿಮಾ ಬಿಡುಗಡೆ ಅಬ್ಬರ ಜೋರಾಗಿಯೇ ಇದೆ. ಈ ಬಹುನಿರೀಕ್ಷಿತ ಸಿನಿಮಾ ನೋಡಲೇಬೇಕಾದ ಐದು ಕಾರಣಗಳು ಇಲ್ಲಿವೆ.ಬಾಹುಬಲಿ ಬಳಿಕ ಪ್ರಭಾಸ್ ಕಮ್ ಬ್ಯಾಕ್ ಬಾಹುಬಲಿ 2 ಸಿನಿಮಾ ಬಳಿಕ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರವಿದು. ಬಾಹುಬಲಿಯಷ್ಟೇ ಕುತೂಹಲ ಹುಟ್ಟಿಸಿರುವ ಸಿನಿಮಾ. ಆ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆದ ಪ್ರಭಾಸ್ ಈ ಚಿತ್ರದಲ್ಲಿ ಹೇಗೆ ಕಾಣಿಸಿಕೊಂಡಿರಬಹುದು