ಬೆಂಗಳೂರು: ಬಹುಭಾಷಾ ತಾರೆ ಪ್ರಕಾಶ್ ರೈ ಮತ್ತೆ ಬಲಪಂಥೀಯರ ವಿರುದ್ಧ ಕಿಡಿ ಕಾರಿದ್ದಾರೆ. ಕಳೆದ ಕೆಲವು ದಿನಗಳಿಂದ ಕೇಂದ್ರ ಸರ್ಕಾರ ಮತ್ತು ಬಲಪಂಥೀಯ ಶಕ್ತಿಗಳ ವಿರುದ್ಧ ಕಿಡಿ ಕಾರುತ್ತಿರುವ ಕಾರಣಕ್ಕೆ ನನ್ನ ಕೆಲವು ಜಾಹೀರಾತುಗಳಿಗೇ ಅಡ್ಡಗಾಲು ಹಾಕಲು ಯತ್ನಗಳು ನಡೆಯುತ್ತಿವೆ ಎಂದು ಹೊಸ ಆರೋಪ ಮಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಕಾಶ್ ರೈ, ನಾನು ರಾಯಭಾರಿಯಾಗಿರುವ ಉತ್ಪನ್ನಗಳ ಸಂಸ್ಥೆ ಮೇಲೆ ಬಲಪಂಥೀಯರು ನನ್ನನ್ನು ಕೈ ಬಿಡುವಂತೆ ಒತ್ತಡ ಹೇರುತ್ತಿದ್ದಾರೆ.