ಮರಾಠಿಯ ಬ್ಲಾಕ್ ಬಸ್ಟರ್ ಸಿನಿಮಾ ಸೈರಾಟ್ ಕನ್ನಡದಲ್ಲಿ ರಿಮೇಕ್ ಆಗುತ್ತಿರುವ ಸಂಗತಿ ನಿಮಗೆಲ್ಲ ಗೊತ್ತಿರಲಿಕ್ಕೆ ಸಾಕು. ಕನ್ನಡ ಅವತರಣಿಕೆಯಲ್ಲಿ ಸಹ ಮೂಲ ಸಿನಿಮಾದ ನಾಯಕಿ ರಿಂಕು ನಟಿಸುತ್ತಿರುವುದು ಈ ಸಿನಿಮಾದ ವಿಶೇಷ. ರಾಕ್ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ದಕ್ಷಿಣ ಭಾರತದ ಪ್ರಖ್ಯಾತ ಖಳನಟ ಸತ್ಯ ಪ್ರಕಾಶ್ ಪುತ್ರ ರಿಂಕು ರಾಜಗುರು ಸಾಥ್ ನೀಡಲಿದ್ದು ಈ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾನೆ. ಎಸ್. ನಾರಾಯಣ್ ನಿರ್ದೇಶಿಸುತ್ತಿರುವ, ಇನ್ನು ಹೆಸರಿಡದ ಈ