ರಿಷಬ್ ಶೆಟ್ಟಿಯ ಕಥಾ ಸಂಗಮ ಸಿನಿಮಾ ಹೇಗಿರಲಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 1 ನವೆಂಬರ್ 2019 (08:46 IST)
ಬೆಂಗಳೂರು: ರಿಷಬ್ ಶೆಟ್ಟಿ ಪ್ರಧಾನ ನಿರ್ದೇಶಕರಾಗಿರುವ ಸಿನಿಮಾ ಸಾಕಷ್ಟು ಕಾರಣಗಳಿಂದ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದೆ.

 
ಕನ್ನಡದ ಪಾಲಿಗೆ ಇದೊಂದು ಪ್ರಯೋಗಾತ್ಮಕ ಚಿತ್ರ. ಸದಾ ತಮ್ಮ ನಿರ್ದೇಶನದ ಮೂಲಕ ಪ್ರೇಕ್ಷಕರಿಗೆ ಹೊಸ ರುಚಿ ಕೊಟ್ಟ ರಿಷಬ್ ಶೆಟ್ಟಿ ಕಥಾ ಸಂಗಮ ಸಿನಿಮಾದಲ್ಲಿ ತಾವಲ್ಲದೆ ಏಳು ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಈ ಸಿನಿಮಾಗೆ ಏಳು ಜನ ನಿರ್ದೇಶಕರು ಎನ್ನುವುದೇ ವಿಶೇಷ.
 
ಈ ಸಿನಿಮಾದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು, ನವಂಬರ್ 4 ಕ್ಕೆ ಟ್ರೈಲರ್ ಬಿಡುಗಡೆಯಾಗಲಿದೆ. ಆ ಮೂಲಕ ಚಿತ್ರದ ವಿಶೇಷತೆಯೇನೆಂದು ತಿಳಿಯಲಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಹರಿಪ್ರಿಯಾ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :