ರುದ್ರಪ್ರಯಾಗ ಸಿನಿಮಾದ ಹೀರೋ ಯಾರೆಂದು ಬಹಿರಂಗಪಡಿಸಿದ ರಿಷಬ್ ಶೆಟ್ಟಿ

ಬೆಂಗಳೂರು, ಬುಧವಾರ, 11 ಸೆಪ್ಟಂಬರ್ 2019 (09:37 IST)

ಬೆಂಗಳೂರು: ರಿಷಬ್ ಶೆಟ್ಟಿ ಎನ್ನುವ ಸಿನಿಮಾ ನಿರ್ದೇಶನ ಮಾಡಲಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಿನಿಮಾಗಾಗಿ ರಿಷಬ್ ಭರ್ಜರಿ ತಯಾರಿ ನಡೆಸಿದ್ದಾರೆ.


 
ರುದ್ರಪ್ರಯಾಗ ಸಿನಿಮಾಗಾಗಿ ಪಶ್ಚಿಮ ಘಟ್ಟದ ಕಾಡು ಮೇಡುಗಳಲ್ಲಿ ಅಲೆದು ಲೊಕೇಷನ್ ಗುರುತಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾದ ಪಾತ್ರವರ್ಗದ ಬಗ್ಗೆ ರಿಷಬ್ ಇದುವರೆಗೆ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.
 
ಆದರೆ ಈಗ ರುದ್ರಪ್ರಯಾಗದ ನಾಯಕ ಯಾರು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅದು ಬೇರಾರೂ ಅಲ್ಲ, ರಿಷಬ್ ನೆಚ್ಚಿನ ನಟ ಅನಂತ್ ನಾಗ್. ಹಿರಿಯ ನಟ ಅನಂತ್ ನಾಗ್ ರನ್ನು ರುದ್ರಪ್ರಯಾಗದ ನಾಯಕ ಎಂದು ಘೋಷಿಸಲು ಸಂತೋಷವಾಗುತ್ತಿದೆ ಎಂದು ರಿಷಬ್ ಹೇಳಿಕೊಂಡಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲೂ ಅನಂತ್ ನಾಗ್ ಪ್ರಮುಖ ಪಾತ್ರ ವಹಿಸಿದ್ದರು. ಅದಾದ ಬಳಿಕ ಮತ್ತೆ ಈ ಹಿರಿಯ ನಟನಿಗೆ ಆಕ್ಷನ್ ಕಟ್ ಹೇಳುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದು ರಿಷಬ್ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಸೀಸನ್ 7 ರಲ್ಲಿ ಸಾಮಾನ್ಯ ಜನರಿಗಿಲ್ಲ ಎಂಟ್ರಿ

ಬೆಂಗಳೂರು: ಬಿಗ್ ಬಾಸ್ ಸೀಸನ್ 7 ಸದ್ಯದಲ್ಲೇ ಆರಂಭವಾಗಲಿದೆ ಎಂದು ಕಲರ್ಸ್ ಕನ್ನಡ ವಾಹಿನಿ ಈಗಾಗಲೇ ಸುಳಿವು ...

news

ಬಿಡುಗಡೆಗೂ ಮೊದಲೇ ಚಿರಂಜೀವಿ ಅಭಿನಯದ ಸೈ ರಾ ನರಸಿಂಹ ರೆಡ್ಡಿ ಇಷ್ಟೊಂದು ದುಡ್ಡು ಕೊಳ್ಳೆ ಹೊಡೆದಿದೆ ನೋಡಿ!

ಹೈದರಾಬಾದ್: ಕೆಲವೊಂದು ಸಿನಿಮಾ ಬಿಡುಗಡೆಗೂ ಮೊದಲೇ ಸದ್ದು ಮಾಡುತ್ತದೆ ಎನ್ನುವುದಕ್ಕೆ ಮೆಗಾಸ್ಟಾರ್ ...

news

ಅಪ್ಪ-ಅಮ್ಮನ ಹಳೇ ಫೋಟೋ ಬಳಸಿ ಎಲ್ಲಿದ್ದೆ ಇಲ್ಲಿ ತನಕ ಪೋಸ್ಟರ್ ಮಾಡಿದ ಸೃಜನ್ ಲೋಕೇಶ್

ಬೆಂಗಳೂರು: ತಮ್ಮ ಹೋಂ ಬ್ಯಾನರ್ ಲೋಕೇಶ್ ಪ್ರೊಡಕ್ಷನ್ ನಡಿಯಲ್ಲಿ ನಿರ್ಮಿಸಿ ನಟಿಸುತ್ತಿರುವ ಎಲ್ಲಿದ್ದೆ ...

news

ಗನ್ ಹಿಡಿದ ರಮೇಶ್ ಅರವಿಂದ್! ಶಿವಾಜಿ ಸುರತ್ಕಲ್ ಟೀಸರ್ ನೋಡಿ ಪ್ರೇಕ್ಷಕರಿಗೆ ಅಚ್ಚರಿ

ಬೆಂಗಳೂರು: ರಮೇಶ್ ಅರವಿಂದ್ ಹೆಚ್ಚಾಗಿ ಕೌಟುಂಬಿಕ ಪಾತ್ರಗಳಲ್ಲೇ ಮಿಂಚಿದವರು. ಸಾಮಾನ್ಯವಾಗಿ ಅವರು ಫೈಟಿಂಗ್ ...