ಮತ್ತೆ ನಿರ್ದೇಶನಕ್ಕಿಳಿಯಲಿದ್ದಾರೆ ರಿಷಬ್ ಶೆಟ್ಟಿ: ಯಾವ ಸಿನಿಮಾ?

ಬೆಂಗಳೂರು| Krishnaveni K| Last Modified ಮಂಗಳವಾರ, 22 ಜೂನ್ 2021 (10:22 IST)
ಬೆಂಗಳೂರು: ಪ್ರತಿಭಾವಂತ ನಟ, ನಿರ್ಮಾಪಕ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತೆ ಡೈರೆಕ್ಷನ್ ಗೆ ಮರಳುತ್ತಿದ್ದಾರೆ. ಇದಕ್ಕಾಗಿ ಕತೆಯನ್ನೂ ಸಿದ್ದಮಾಡಿಕೊಂಡಿದ್ದಾರೆ.
 > ಬೆಲ್ ಬಾಟಂ ಸಿನಿಮಾ ಬಳಿಕ ರಿಷಬ್ ನಟನಾಗಿ, ನಿರ್ಮಾಪಕನಾಗಿಯೇ ಗುರುತಿಸಿಕೊಂಡಿದ್ದರು. ಇದರ ನಡುವೆ ಲಾಕ್ ಡೌನ್, ಕೊರೋನಾದಿಂದಾಗಿ ಅವರು ನಿರ್ದೇಶನ ಮಾಡಬೇಕಿದ್ದ ಸಿನಿಮಾ ರುದ್ರಪ್ರಯಾಗ ಅರ್ಧಕ್ಕೇ ನಿಂತುಹೋಯಿತು.>   ಈಗ ಹೊಸ ಕತೆ ರೆಡಿ ಮಾಡಿಕೊಂಡಿದ್ದೇನೆ. ಮತ್ತೆ ನಿರ್ದೇಶನಕ್ಕೆ ಮರಳುವುದಾಗಿ ಹೇಳಿದ್ದಾರೆ.  ಮಂಗಳೂರು ಹಿನ್ನಲೆಯಲ್ಲಿ ಮೂಡಿಬರಲಿರುವ ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷದ ಕತೆಯನ್ನಿಟ್ಟುಕೊಂಡು ಅವರು ಸಿನಿಮಾ ಮಾಡಲಿದ್ದಾರಂತೆ. ಸದ್ಯಕ್ಕೆ ಅವರೀಗ ಲೊಕೇಷನ್ ಹುಡುಕುವುದರಲ್ಲಿ ಬ್ಯುಸಿ. ಉಳಿದ ಡೀಟೈಲ್ಸ್ ಸದ್ಯದಲ್ಲೇ ಕೊಡಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :