ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಬಂದ ಮೋಸ್ಟ್ ಕ್ರಿಯೇಟಿವ್ ನಿರ್ದೇಶಕರ ಸಾಲಿನಲ್ಲಿ ರಿಷಬ್ ಶೆಟ್ಟಿ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಇಂದು ರಿಷಬ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವರ್ಷ ರಿಷಬ್ ಫುಲ್ ಬ್ಯುಸಿಯಾಗಿದ್ದರು. ಅವರ ನಿರ್ದೇಶನದಲ್ಲಿ ರುದ್ರ ಪ್ರಯಾಗ ಎನ್ನುವ ಮಹತ್ವಾಂಕಾಂಕ್ಷಿ ಸಿನಿಮಾವೊಂದನ್ನು ಸೆಟ್ಟೇರಿತ್ತು. ಆದರೆ ಕೊರೋನಾ ಕಾರಣದಿಂದ ರುದ್ರಪ್ರಯಾಗ ಚಿತ್ರೀಕರಣ ಮುಂದೂಡಿಕೆಯಾಗಿದೆ.ಹಾಗಿದ್ದರೂ ರಿಷಬ್ ಸುಮ್ಮನೇ ಕೂತಿಲ್ಲ. ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಬೆಲ್ ಬಾಟಂನಲ್ಲಿ ನಾಯಕನಾಗಿ ಗೆದ್ದ